Odeya darshan

ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಗೆ ಅಂತ ಎಲ್ಲರಿಗೂ ಗೊತ್ತು ಅವರೊಬ್ಬ ಮಾಸ್ ಕ್ಲಾಸ್ ಮತ್ತು ಅವರೇ ಹೇಳಿಕೊಂಡಿರುವ ಹಾಗೆ "ಪಕ್ಕಾ ಲೋಕಲ್ ಆದರೆ ಇರೋದು ಸ್ಟ್ಯಾಂಡರ್ಡ್" ಮೊನ್ನೆ ಮಂಡ್ಯದಲ್ಲಿ ಅವರೇ "ನನ್ನಂತ ಕಚಡಾ ನನ್ ಮಗಾ ನಿಮಗೆ ಎಲ್ಲಿ ಹುಡುಕಿದರೂ ಸಿಗಲ್ಲ ಅಣ್ಣ ನನಗೆ ಇಷ್ಟ ದಿನ ಎರಡು ಮುಖ ಇತ್ತು ಅಣ್ಣ ಈಕಡೆ ಹೌದು ಅಂದರೆ ಹೌದು ಇಲ್ಲ ಅಂದರೆ ಇಲ್ಲ"

ಇಲ್ಲಿ ದರ್ಶನ್ ಯಾಕೆ ಹೀಗೆ ಹೇಳಿದ್ರು ಅಂದರೆ ಅವರು ಇರೋದೇ ಹಾಗೆ ಕಣ್ರೀ ಒಂದ ಸಲ ಅವರಿಗೆ ಯಾರಾದ್ರೂ ಇಷ್ಟ ಆದರೆ   ಅವರು ಯಾರೇ ಇರಲಿ ಅವರನ್ನ ಸಾಯೋತನಕ ಕೈ ಬಿಡಲ್ಲ ಹಾಗೇನೇ ಒಂದ ಸಲ ಅವರಿಗೆ ಅವರಲ್ಲಿ ಮೋಸ ಸುಳ್ಳು ಅಂತ ಕಂಡ ಬಂದರೆ ಅವನು ಎಷ್ಟೇ ದೊಡ್ಡ ವ್ಯಕ್ತಿ ಆಗಲಿ ಆ ಕ್ಷಣಕ್ಕೆ ಅವನು ಅವರ ಲೈಫಿಂದ ಡಿಲೀಟ್ ಆಗಿರ್ತಾನೆ ಹಾಗೆ ಡಿಲೀಟ್ ಆಗಿರೋ ವ್ಯಕ್ತಿ ಯಾರು ಅಂತ ಇಡೀ ಕರ್ನಾಟಕಕ್ಕೆ ಗೊತ್ತು ಬಿಡಿ.

ಮೀಡಿಯಾದವರು ಕೂಡ ಎಷ್ಟೋ ಸಲ ಇಬ್ರನ್ನು ಒಂದ ಮಾಡೋಕೆ ಹೋಗಿ ಸಾಕಷ್ಟು ಸಲ ದರ್ಶನ್ ಕಡೆ ಬೈಸಿಕೊಂಡಿದ್ದು ಉಂಟು ಆದ್ರೆ ದರ್ಶನ್ ಬಗ್ಗೆ ಆ ವ್ಯಕ್ತಿಗೆ ಮೀಡಿಯಾದವರು ಪ್ರಶ್ನೆಗಳನ್ನ ಕೇಳಿದ್ರೆ ಆತ ಕೂಲಾಗಿ ಕಾಮ್ ಆಗಿ ಅವನು ಯಾವತ್ತೂ ನನ್ನ ಫ್ರೆಂಡ್ ಅವನು ಯಾವತ್ತಿಗೂ ನನ್ ಹಾರ್ಟ್ ನಲ್ಲಿ ಇರ್ತಾನೆ ಅಂತ ಹೇಳಿದ್ರು ಗೆಳೆತನದ ಬಗ್ಗೆ ಆ ಸ್ಟಾರ್ ಕೊಡೊ ಕಾಳಜಿಗೆ ಜಗಳ ಸಾಕು ಇನ್ನು ಒಂದಾಗಿರೋಣ ಅಂತ ಹೇಳೋ ಆತನ ಮಾತುಗಳು ನಿಜಕ್ಕೂ ಸಂತೋಷ ಇವ ಯಾವುದೇ ವಿಷಯಗಳು ದರ್ಶನ್ಗೆ ಗೊತ್ತಿಲ್ಲ ಅಂತ ಅಲ್ಲ
ಆದ್ರೆ ದರ್ಶನ್ ಇರೋದೇ ಹಾಗೆ ರೀ
ಯಾರಿಗೂ ಕೂಡ ಕೇರ್ ಮಾಡೋಲ್ಲ ಹಾಗೇನಾದ್ರೂ ಆಗಿದ್ರೆ ಅಂಬರೀಷ್ ಅವ್ರು ಯಾವತ್ತೋ ಆ ಕೆಲಸ ಮಾಡ್ತಿದ್ರು
ನಾವು ಕೂಡ ದರ್ಶನ್ ಅವರ ಲೈಫನಿಂದ ಅಳವಡಿಸಿಕೊಳ್ಳೋ ವಿಷಯಗಳು ತುಂಬಾನೇ ಇವೆ ಹಾಗೇನೇ ದರ್ಶನ್ ಗೆ ಆಗದೆ ಇರೋ ವಿಷಯಗಳು ತುಂಬಾ ಇವೆ ಅವುಗಳನ್ನ ಮುಂದೆ ಯಾವಾಗಾದ್ರೂ ಹೇಳ್ತಿನಿ
ದರ್ಶನ್ ಫ್ರೆಂಡ್ಶಿಪ್ ಬಗ್ಗೆ ಹೇಳೋದಾದ್ರೆ ಅವರದು ಒಂದು ಸ್ಮಾಲ್ ಗ್ಯಾಂಗ್ ಕನ್ನಡ ಚಿತ್ರ ರಂಗದಲ್ಲಿ ಹೀಗೆ ಕೆಲವೇ ಕೆಲವ್ರು ಸ್ಟಾರ್ಗಳು  ನಾಜೂಕಾಗಿ ತಮ್ಮ ಗೆಳೆತನವನ್ನ ಕಾಪಾಡಿಕೊಂಡಿದ್ದಾರೆ ಅದರಲ್ಲಿ ಹಾಗೆನೇ ಅಂತವರ ಗೆಳೆತನಕ್ಕೆ ಧಕ್ಕೆ ಬಂದಾಗ ಹಂತವರನ್ನು ಸರಸಾಗಾಟವಾಗಿ ತಿರಸ್ಕರಿಸಿದ್ದಾರೆ


 ಅದರಲ್ಲಿ ನಾವು ನೋಡೋದಾದರೆ ವಿಷ್ಣು ವರ್ಧನ್ ಹಾಗು ದ್ವಾರಕೀಶ್ ಗೆಳೆತನ ಹೌದು ಒಂದು ಕಾಲದ ಜೀವದಗೆಳೆಯರಾಗಿದ್ದ ಇವರು ಯಾವುದೊ ಒಂದು ಕೆಟ್ಟ ಘಳಿಗೆಯಲ್ಲಿ ಬೇರೆ ಬೇರೆ ಆದವರು ಯಾವತ್ತಿಗೂ ಒಂದಾಗಲಿಲ್ಲ ಆಪ್ತ ಮಿತ್ರ ಸಿನಿಮಾಕ್ಕೆ ಒಂದಾಗಿ ಸಿನಿಮಾ ಮಾಡಿದರು ಕೂಡ ಅಲ್ಲಿ ಅವರ ಮೊದಲಿನ ಗೆಳೆತನ ಮರಳಿರಲಿಲ್ಲ


ಅದು ತಮ್ಮ ಮಗನ ಮುಖಾಂತರ ದ್ವಾರಕೀಶ್ ವಿಷ್ಣುವರ್ಧನ್ ಗೆ ಹೇಳಿ ಕಳುಹಿಸಿ ಆಗ ವಿಷ್ಣು ಒಪ್ಪಿದಾಗ ಅವರಿಗೆ ಸಿನಿಮಾ ಮಾಡಿದ್ದರು ಇದು ದ್ವಾರಕೀಶ್ ಅವರೇ ಪ್ರಜಾವಾಣಿ ಪತ್ರಿಕೆ ಯಲ್ಲಿ ಹೇಳಿಕೊಂಡಿದ್ದಾರೆ


 ಇನ್ನು ಇದೆ ದ್ವಾರಕೀಶ್ ಹಾಗು ರಜನೀಕಾಂತ್ ಗೆಳೆತನ ಕೂಡ ತುಂಬಾ ಆಪ್ತವಾಗಿತ್ತು ಆದರೆ ಏನಾಯಿತೋ ಗೊತ್ತಿಲ್ಲ ರಜನೀಕಾಂತ್ ಜೀವನದಿಂದಾನು ದ್ವಾರಕೀಶ್ ಅವರಿಗೆ ಗೇಟ್ ಪಾಸ್ ನೀಡಲಾಯಿತು ದ್ವಾರಕೀಶ್ ಅವರು ಇವತ್ತಿಗೂ ರಾಯರಲ್ಲಿ ಬೇಡಿಕೊಳ್ಳುತ್ತಾರಂತೆ ಒಂದಾಗಿದ್ದ ನಾವು ಬೇರೆಯಾಗಲು ಕಾರಣ ಏನು ಅಂತ


 ಹೀಗೆ ಅನೇಕ ಸ್ಟಾರ್ ನಟರ ಜೀವನದಲ್ಲೂ ಗೆಳೆತನದ ಬಗ್ಗೆ ಗಲಾಟೆಗಳು ಆಗಿವೆ ಅಂತದ್ದರಲ್ಲಿ ಕೆಲವರು ನಾಜೂಕಾಗಿ ಹ್ಯಾಂಡಲ್ ಮಾಡುತ್ತಾರೆ ಅಂದರೆ ದರ್ಶನ್ ಹಾಗೆ ಮತ್ತೆ ಇನ್ನು ಕೆಲವರು ಬೇಗ ಅವರ ತಪ್ಪನ್ನು ಕ್ಷಮಿಸಿ ತಮ್ಮ ಜೀವನದೊಳಗೆ ಅವರನ್ನ ಎಂಟ್ರಿ ಮಾಡಿಕೊಳ್ಳುತ್ತಾರೆ

ಇವತ್ತಿಗೂ ದರ್ಶನ್ ತಮ್ಮ ಗೆಳೆಯರ ಗುಂಪನ್ನ ತುಂಬಾ ಚಿಕ್ಕದಾಗಿ ಚೊಕ್ಕದಾಗಿ ಇಟ್ಟಿದ್ದಾರೆ ಅದರಲ್ಲಿ ಎಲ್ಲರಿಗೂ ಗೊತ್ತಿರುವ ಹಾಗೆ ಸೃಜನ್ ಲೋಕೇಶ್ ಅತ್ಯಂತ ಆಪ್ತ ಗೆಳೆಯ ಸೃಜನ್ ಗೆ ದರ್ಶನ್ ಅವರು ಸೃಜನ್ ತೂಗುದೀಪ ಹಾಗೇನೇ ದರ್ಶನ್ಗೆ ಸೃಜನ್ ಅವರು ದರ್ಶನ್ ಲೋಕೇಶ್ ಅಂತ ಕರೆದುಕೊಳ್ಳುತ್ತಾರೆ ಅಷ್ಟು ಆಪ್ತತೆ ಅವರಲ್ಲಿ ಇದೆ


 ಇನ್ನು ಸಿನಿಮಾ ಇಲ್ಲದಿದ್ದಾಗ ಅಥವಾ ಸಮಯ ಮಾಡಿಕೊಂಡು ದರ್ಶನ್ ಹಾಗು ಅವರ ಸ್ನೇಹಿತರು ಸೇರುವ ಜಾಗ ಫಾರ್ಮ್ ಹೌಸ್ ಹೌದು ಅದು ದರ್ಶನ್ ಅವರ ಪ್ರಿಯವಾದ ಜಾಗಗಳಲ್ಲಿ ಅದು ಮೊದಲನೆಯದು ಅಲ್ಲಿ ಅವರು ಇಲ್ಲ ಗೆಳೆಯರನ್ನ ಗುಡ್ಡೆ ಹಾಕಿಕೊಂಡು ಅಡುಗೆ ಮಾಡೋದು ಪಾರ್ಟಿಗಳನ್ನ ಮಾಡೋದು ಕಾಮನ್ ಇನ್ನು ವರ್ಷಕ್ಕೊಮ್ಮೆ ಗೆಳೆಯರೆಲ್ಲ ಕೂಡಿ ಅಯ್ಯಪ್ಪ ಸ್ವಾಮಿ ದರುಶನಕ್ಕೆ ಶಬರಿಮಲೆ ಹೋಗುವುದು ಕಾಡಿನಲ್ಲಿ ತಿರುಗೋದು ಫೋಟೋಗ್ರಫಿ ಪ್ರಾಣಿಗಳ ಸಹವಾಸ ಇದು ಎಲ್ಲರಿಗೂ ಗೊತ್ತಿಲ್ಲದ ಸಂಗತಿಗಳೆಲ್ಲನ್ನ ಬಿಡಿ.


Comments

Popular posts from this blog

odeya film download in tamilrockers.com

What are the top 4 industry makes you more rich in World